KSOU Mysuru

Blinking feature using CSS

Nalwadi Krishnaraja Odeyar Study Chair

ಸ್ಥಾಪನೆ, ಉದ್ದೇಶಗಳು

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಒಡೆಯರ್ ವಂಶದ ಸಾಧನೆಗಳು, ಆಡಳಿತ, ಸಮಾನತೆಗೆ ಪ್ರಯತ್ನಗಳು, ಜನಪರ- ಸಾಮಾಜಿಕ ಕೆಲಸಕಾರ್ಯಗಳು ಇವುಗಳನ್ನು ಸಮಾಜದ ಮುಂದೆ ಇಡುವ ಮೂಲಕ ಉತ್ತಮ ಸಮಾಜದ ಸ್ಥಾಪನೆಗೆ ಪ್ರಯತ್ನಿಸುವುದು.

1.ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಇತಿಹಾಸದ ಬಗ್ಗೆ ಹೊಸ ಸಂಶೋಧನೆಗಳನ್ನು ನಡೆಸುವುದು.

2.ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಮಾಜಿಕ ಸಾಧನೆಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುವುದು.

3.ಮೈಸೂರು ಅರಸರ ಇತಿಹಾಸ, ಕಲೆ, ವಾಸ್ತುಶಿಲ್ಪ, ಆಡಳಿತ, ಸಮಸ್ಯೆಗಳು ಇತ್ಯಾದಿಗಳ ಬಗ್ಗೆ ಹೊಸ ಸಂಶೋಧನೆಗಳನ್ನು ನಡೆಸುವುದು.

4.ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮೈಸೂರು ಅರಸರ ಬಗೆಗಿನ ಹೊಸ ವಿಚಾರಸಂಕಿರಣ, ಕಾರ್ಯಾಗಾರ, ಇತ್ಯಾದಿಗಳನ್ನು ನಡೆಸುವುದು.

5.ಪುಸ್ತಕ ಪ್ರಕಟಣೆ, ಸಂಶೋಧನಾಗ್ರAಥ ಪ್ರಕಟಣೆ, ವಿಶೇಷ ದತ್ತಿ ಉಪನ್ಯಾಸಗಳನ್ನು ಏರ್ಪಡಿಸುವುದು.

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅಧ್ಯಯನ ಪೀಠವು ದಿನಾಂಕ ೦೪/೦೮/೨೦೧೨ ರಲ್ಲಿ ಸ್ಥಾಪನೆಯಾಗಿದ್ದು ಈ ಪೀಠಕ್ಕೆ ೦೬/೦೭/೨೦೧೩ ರಿಂದ ಡಾ. ಶಲ್ವ ಪಿಳ್ಳೈ ಅಯ್ಯಂಗಾರ್, ಮುಖ್ಯಸ್ಥರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗ ರವರನ್ನು ಗೌರವ ನಿರ್ದಶಕರನಾಗಿ ಮಾಡಲಾಗಿದೆ.

About

Krishnaraja Wadiyar IV (4 June 1884 – 3 August 1940) was the Maharaja of Mysore from 1894 until his death in 1940. He is popularly called Rajarshi (Sanskrit: rājarṣi, lit. ’sage king’), the name which was given by Mahatma Gandhi, for his administrative reforms and achievements[1] At the time of his death, he was one of the world’s wealthiest men, with a personal fortune estimated in 1940 to be worth US$400 million, equivalent to $7 billion at 2018 prices.[2] He was the second-wealthiest Indian, after Mir Osman Ali Khan, Nizam of Hyderabad.

shalva pillai320

Dr. Shalva Pille Iyengar

Coordinator

Activities

• ೦೪/೦೭/೨೦೧೪ ರಂದು ನಾಲ್ವಡಿ ಕೃಷ್ಣರಾಜ ಒಡೆಯರ ಸಾಧನೆಗಳ ಬಗ್ಗೆ ಒಂದು ದಿನದ ಅಂತಾರಾಷ್ಟ್ರೀಯ ವಿಚಾರಸಂಕೀರ್ಣ

೦೪/೦೭/೨೦೧೪ ರಂದು ನಾಲ್ವಡಿ ಕೃಷ್ಣರಾಜ ಒಡೆಯರ ಸಾಧನೆಗಳ ಬಗ್ಗೆ ಒಂದು ದಿನದ ಅಂತಾರಾಷ್ಟ್ರೀಯ ವಿಚಾರಸಂಕೀರ್ಣವನ್ನು ನಡೆಸಲಾಗಿದ್ದು ಈ ವಿಚಾರ ಸಂಕೀರ್ಣದಲ್ಲಿ ವಿವಿಧ ವಿಶ್ವ ವಿದ್ಯಾಲಯಗಳ ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿ ಈ ವಿಚಾರ ಸಂಕೀರ್ಣವನ್ನು ಯಶಸ್ವಿಗೊಳ್ಳಿಸಿದ್ದರು .

• ದಿನಾಂಕ ೧೧ ಮತ್ತು ೧೨ ೨೦೧೮ ರಂದು ಒಂದು ದಿನದ ಅಂತಾರಾಷ್ಟ್ರೀಯ ಮಟ್ಟದ ವಿಶೇಷ ಉಪನ್ಯಾಸ

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅಧ್ಯಯನ ಪೀಠದಿಂದ ದಿನಾಂಕ ೧೧ ಮತ್ತು ೧೨ ೨೦೧೮ ರಂದು ಒಂದು ದಿನದ ಅಂತಾರಾಷ್ಟ್ರೀಯ ಮಟ್ಟದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಈ ವಿಚಾರ ಸಂಕೀರ್ಣದಲ್ಲಿ ಜರ್ಮನ್ ಮತ್ತು ಭಾರತ ದೇಶಗಳ ಐತಿಹಾಸಿಕ ಸಂಬAಧಗಳ ಬಗ್ಗೆ ಹಾಗೂ ಭಾರತದ ಕಲೆ ಮತ್ತು ವಸ್ತು ಶಿಲ್ಪಗಳ ಬಗ್ಗೆ ಜರ್ಮನ್ ದೇಶದ ಮಾರ್ಕಸ್ಹುಕ್ ರವರು ವಿಶೇಷ ಉಪಾನ್ಯಾಸ ನೀಡಿರುತ್ತಾರೆ ಈ ಕಾರ್ಯಕ್ರಮದಲ್ಲಿ ಅಧ್ಯಾಪಕರು ಗಣ್ಯರು ಸಂಶೋಧಕರು ಹಾಗೂ ವಿವಿಧ ಕ್ಷೇತ್ರಗಳ ಪರಿಣತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳ್ಳಿಸಿದರು.

• ದಿನಾಂಕ ೨೦/೦೮/೨೦೧೯ ಮತ್ತು ೨೧/೦೮/೨೦೧೯ ರಂದು ಎರಡು ದಿನದ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣ

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪೀಠ ಹಾಗೂ ದಿ ಮಿಥಿಕ್ ಸೊಸೈಟಿ ಬೆಂಗಳೂರು ಇವರ ಸಹಯೋಗದಲ್ಲಿ ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಜಯಚಾಮರಾಜ ಒಡೆಯರ್ ರವರ ಜೀವನ ಸಾಧನೆಗಳು ಎಂಬ ವಿಚಾರದ ಬಗ್ಗೆ ದಿನಾಂಕ ೨೦/೦೮/೨೦೧೯ ಮತ್ತು ೨೧/೦೮/೨೦೧೯ ರಂದು ಎರಡು ದಿನದ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಶ್ರೀ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ರವರು ಉದ್ಘಾಟಿಸಿದ್ದಾರು ಮುಖ್ಯ ಅತಿಥಿಗಳಾಗಿ ಪ್ರೊ.ಕೃ.ನರಹರಿ, ಶ್ರೀ.ವಿ.ನಾಗರಾಜ್ ಅಧ್ಯಕ್ಷತೆಯನ್ನು ಡಾ. ಪ್ರೊ.ಎಸ್.ವಿದ್ಯಾಶಂಕರ್ ಹಾಗೂ ಬೋಧಕ ಮತ್ತು ಭೋಧಕೇತರ ಮುಂತಾದವರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳ್ಳಿಸಿದರು.

Reports

No Data Avilable

Scroll to Top