Scholarship
- Student Zone
- Scholarship
Scholarship
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕಳೆದ 2012-13ನೇ ಸಾಲಿನಿಂದ ಪರಿಶಿಷ್ಟ ಜಾತಿ/ವರ್ಗದ ಘಟಕ ಸ್ಥಾಪನೆಗೊಂಡು ಅಂದಿನಿಂದ 2020-21ನೇ ಸಾಲಿನವರೆಗೆ ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯಡಿ ಪ್ರವೇಶಾತಿಯನ್ನು ನೀಡಲಾಗಿರುತ್ತದೆ. ತದನಂತರ ಅಧಿಸೂಚನೆ ದಿನಾಂಕ: 10 11 2021ರಂದು ಜಾರಿಗೆ ಬಂದಂತೆ ವಿದ್ಯಾರ್ಥಿವೇತನ ಘಟಕ (SCHOLARSHIP CELL) ಎಂದು ಮರುನಾಮಕರಣ ಮಾಡಿ ಅಧಿಸೂಚನೆ ಹೊರಡಿಸಿ, ವಿದ್ಯಾರ್ಥಿ ವೇತನ ಘಟಕದ ಅಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷಾಧಿಕಾರಿ ಹಾಗೂ ಪ್ರತ್ಯೇಕವಾಗಿ ಸಂಯೋಜನಾಧಿಕಾರಿಗಳನ್ನು ನೇಮಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿವೇತನ ಘಟಕವು ಕಾರ್ಯ ನಿರ್ವಹಿಸುತ್ತಾ ಬರತ್ತಿದ್ದು, ಸದರಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಇಲಾಖೆಗಳಿಂದ ನಿಯಮನುಸಾರವಾಗಿ ವಿದ್ಯಾರ್ಥಿವೇತನ ಪಡೆಯಲು ಸಹಕಾರಿಯಾಗುವಂತೆ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಾ ಬರಲಾಗುತ್ತಿದೆ.
No | Name Of The Staff | Designation |
---|---|---|
1 | Dr. Chinnaiah P.M | Special Officer |
2 | Pradeep Giri | Assistant Registrar / Coordinator |
3 | Dr. Muhammad Nasrullah Khan | Coordinator |
4 | Harsha M | SDA |
5 | Swamy C | SDA [ Grade Pay ] |
6 | Rashmi K | SDA [ Grade Pay ] |
7 | Hemashree S | SDA [ Temporary ] |
Activities
ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವದಂತೆ 2021-22ನೇ ಸಾಲಿನ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳ ವೈಯಕ್ತಿಕ ಖಾತೆಗೆ ಜಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಶಿಕ್ಷಣ ಕ್ರಮಗಳಿಗೆ ಪೂರ್ಣ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆದು, ಸಂಬಂಧಿತ ಸಮಾಜ ಕಲ್ಯಾಣ ಇಲಾಖೆಯ ನಿಯಮಾನುಸಾರದಂತೆ ಶುಲ್ಕ ಮರುಭರಿಕೆಗೆ ಅರ್ಜಿ ಸಲ್ಲಿಸುವ ಅರ್ಹ ಪರಿಶಿಷ್ಟ ಜಾತಿ/ವರ್ಗ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಘಟಕದಿಂದ ಪ್ರತಿ ಸಾಲಿನ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು, SSP ತಂತ್ರಾಂಶದಡಿ ಅರ್ಜಿಸಲ್ಲಿಸಲು ಸೂಕ್ತ ಮಾಹಿತಿಗಳನ್ನು ನೀಡಲಾಗುತ್ತಿದೆ. ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವಲ್ಲಿ ವಿದ್ಯಾರ್ಥಿಗಳ ಗೊಂದಲಗಳನ್ನು ಪರಿಹರಿಸುವುದು. 2004ರ ಹಿಂದೆ SSLC ಹಾಗೂ 2010ರ ಹಿಂದೆ PUC ಉತ್ತೀರ್ಣರಾಗಿರುವ ಪ್ರಥಮ ವರ್ಷದ ಎಲ್ಲಾ ವಿದ್ಯಾರ್ಥಿಗಳು SSLC, PUC ಮೂಲ ಅಂಕಪಟ್ಟಿಗಳನ್ನು SSP ಯಲ್ಲಿ ಅಪ್ಲೋಡ್ ಮಾಡಿರುವ ದಾಖಲೆಗಳನ್ನು ಇ-ದೃಢೀಕರಣ ಅಧಿಕಾರಿಗಳಿಂದ ವಿದ್ಯಾರ್ಥಿವೇತನ ಘಟಕದಲ್ಲಿ ಇ-ದೃಢೀಕರಣಗೊಂಡ ನಂತರ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಸಹಕರಿಸುವುದು. SSP ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಂತಿಮ ಸ್ವೀಕೃತಿಯನ್ನು ಪಡೆಯುವಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ಪರಿಶಿಷ್ಟ ಜಾತಿ/ವರ್ಗ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತವಾರು ಪ್ರತ್ಯೇಕಿಸಿ ಪಟ್ಟಿ ಮಾಡಿ ಇಡಲಾಗುವುದು. ಕೇಂದ್ರ ಕಛೇರಿಯ ಹಾಗೂ ಎಲ್ಲಾ ಪ್ರಾದೇಶಿಕ ಕೇಂದ್ರಗಳಿಂದ ಆಯಾಯ ಸಾಲಿನಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಪ್ರವೇಶಾತಿ ಮಾಹಿತಿಯನ್ನು ಸಂಗ್ರಹಿಸಿ, ಗಣಕ ಯಂತ್ರ ದಲ್ಲಿ ದತ್ತಾಂಶದ ರೂಪದಲ್ಲಿ ನಮೂದಿಸಿಕೊಳ್ಳಲಾಗುವುದು. ತದನಂತರ ಸಮಾಜಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿವೇತನ ಮಂಜೂರಾಗಿರುವ ಮಂಜೂರಾತಿ ಪಟ್ಟಿಯೊಂದಿಗೆ ಪ್ರಸ್ತಾವನೆ ಪಟ್ಟಿಯನ್ನು ಪರಿಶೀಲಿಸಿ ಡಿ.ಸಿ.ಬಿ ಯನ್ನು ತಯಾರಿಸಿ, ಹಣಕಾಸು ವಿಭಾಗಕ್ಕೆ Soft Copy ಮತ್ತು Hard Copy ಯನ್ನು ಸಲ್ಲಿಸಲಾಗುವುದು. ಲೆಕ್ಕಪರಿಶೋದನೆಯ ಸಂದರ್ಭದಲ್ಲಿ ಆಯಾಯ ಸಾಲಿನ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದಂತೆ ಕೇಳಲಾಗುವ ಪ್ರಶ್ನೆಗಳಿಗೆ ಮಾಹಿತಿ ಮತ್ತು ದಾಖಲೆಗಳನ್ನು ಸಕಾಲದಲ್ಲಿ ಒದಗಿಸುವುದು. ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿವೇತನವು ಮಂಜೂರಾಗದೆ ಇರುವಂತಹ ವಿದ್ಯಾರ್ಥಿಗಳನ್ನು ಪಟ್ಟಿಮಾಡಿ ಸಂಬಂಧಿಸಿದ ಇಲಾಖೆಗಳಿಗೆ ಮಂಜೂರು ಮಾಡಿಕೊಡುವಂತೆ ಪತ್ರದ ಮುಖೇನ ಕೋರುವುದು ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಕೇಳಲಾಗುವ ಮಾಹಿತಿಯನ್ನು ಸಕಾಲದಲ್ಲಿ ಒದಗಿಸಲಾಗುವುದು.
Events and Circulars
Contact Us
ವಿದ್ಯಾರ್ಥಿವೇತನ ಘಟಕದ ದೂರವಾಣಿ ಸಂಖ್ಯೆ: 0821-2500073
ಅಂತರಿಕ ದೂರವಾಣಿ ಸಂಖ್ಯೆ : 312
ಇ-ಮೇಲ್ ವಿಳಾಸ: coordinatorscstcellksou@gmail.com
ಕ್ರಮ ಸಂಖ್ಯೆ | ಹೆಸರು ಮತ್ತು ಪದನಾಮ ಶ್ರೀ/ಶ್ರೀಮತಿ | ಮೊಬೈಲ್ ಸಂಖ್ಯೆ |
1 | ಡಾ|| ಚಿನ್ನಯ್ಯ ಪಿ.ಎಂ ವಿಶೇಷಾಧಿಕಾರಿ | 9164556402 |
2 | ನಾಗೇಂದ್ರ. ಆರ್ ಸಹಾಯಕ ಕುಲಸಚಿವ/ಸಂಯೋಜನಾಧಿಕಾರಿ | 8073331535 |
3 | ಡಾ|| ಮಹಮದ್ ನಸ್ರೂಲ್ಲಾ ಖಾನ್ ಸಂಯೋಜನಾಧಿಕಾರಿ | 9845916982 |