ನಮ್ಮ ಬಗ್ಗೆ

ಆಡಳಿತ

ಶೈಕ್ಷಣಿಕ

ಕಾರ್ಯಕ್ರಮಗಳು

ಸೌಲಭ್ಯಗಳು

ವಿದ್ಯಾರ್ಥಿಗಳ ವಲಯ

ಕುವೆಂಪು ಅಧ್ಯಯನ ಪೀಠ


ಪರಿಚಯ

ಕರ್ನಾಟಕ ರಾಜ್ಯದ ಮುಕ್ತ ವಿಶ್ವವಿದ್ಯಾನಿಲಯವು 1996ರಲ್ಲಿ ಸ್ಥಾಪನೆಯಾಗಿದ್ದು 2020-21ನೇ ಸಾಲಿನಲ್ಲಿ 25ವರ್ಷಗಳು ತುಂಬಿ ‘ಬೆಳ್ಳಿ ಹಬ್ಬ’ವನ್ನು ಆಚರಿಸಿಕೊಂಡಿದೆ. ಕರಾಮುವಿಯು ‘ಯು.ಜಿ.ಸಿ’ ಮಾನ್ಯತೆಗೆ ಒಳಪಟ್ಟಿದ್ದು, ‘12ಬಿ’ ಮಾನ್ಯತೆಯು ಕೂಡ ದೊರೆತಿದೆ. ‘ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ’ ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವವಿದ್ಯಾನಿಲಯವು ಎರಡುವರೆ ದಶಕಗಳಿಂದ ಉನ್ನತ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ. ಸಮಾಜದಲ್ಲಿ ಉನ್ನತ ಶಿಕ್ಷಣದಿಂದ ವಂಚಿತರಾದವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಹೆಣ್ಣು ಮಕ್ಕಳು, ಗೃಹಿಣಿಯರು, ಹಲವಾರು ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದುವರೆಸುವುದಕ್ಕೆ ಸಾಧ್ಯವಾಗದೆ ಇರುವವರಿಗೆ, ಸಣ್ಣಪುಟ್ಟ ಉದ್ಯೋಗಗಳಲ್ಲಿ ನಿರತರಾದವರಿಗೆ, ಸಮಾಜದ ಎಲ್ಲಾ ವರ್ಗದವರಿಗೆ ಅತ್ಯಂತ ಮೌಲಿಕವಾದ ಸಿದ್ಧಪಾಠಗಳನ್ನು ಸಿದ್ಧಪಡಿಸಿ ಕಡಿಮೆ ಶುಲ್ಕದಲ್ಲಿ ಪ್ರವೇಶಾತಿಗೆ ಅವಕಾಶ ನೀಡಿ, ಆಸಕ್ತರ ಮನೆ ಬಾಗಿಲಿಗೆ ಉನ್ನತ ಶಿಕ್ಷಣವನ್ನು ಒದಗಿಸುವ ಕೈಂಕರ್ಯದಲ್ಲಿ ಕರಾಮುವಿಯು ನಿರಂತರವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ಕರಾಮುವಿಯಲ್ಲಿ ವ್ಯಾಸಂಗ ಮಾಡಿರುವವರು ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತ ವ್ಯಕ್ತಿಗಳಾಗಿ ಹಾಗೂ ಗಣ್ಯವ್ಯಕ್ತಿಯಾಗಿ ಹೆಸರು ಮಾಡಿದ್ದಾರೆ. ಹಾಗೆಯೇ ದೇಶ- ವಿದೇಶಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ನಡೆಸುವ ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಉನ್ನತ ಸ್ಥಾನಮಾನದ ಹುದ್ದೆಯನ್ನು ಪಡೆದು ನಿರ್ವಹಿಸುತ್ತಿದ್ದಾರೆ. ಹೀಗೆ ಕರಾಮುವಿಯು ಸಮಾಜಮುಖಿ, ಶಿಕ್ಷಣಮುಖಿ ಮತ್ತು ಉದ್ಯೋಗಮುಖಿಯಾಗಿ ದಾಪುಗಾಲು ಇಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಕರಾಮುವಿಯು ಉನ್ನತ ವ್ಯಾಸಂಗವನ್ನು ಮಾಡುವುದಕ್ಕೆ ಅವಕಾಶ ಕಲ್ಪಿಸಿರುವುದರ ಜೊತೆಗೆ ನಮ್ಮ ದೇಶದ ಮತ್ತು ನಾಡಿನ ಮಹಾನ್ ಪುರುಷರ ಪೀಠÀಗಳನ್ನು ಸ್ಥಾಪನೆ ಮಾಡಿದೆ. ಇಂತಹ ಮಹಾನ್ ವ್ಯಕ್ತಿಗಳ ಜೀವನ, ಸಾಧನೆ, ಆದರ್ಶ ಹಾಗೂ ಅವರ ವಿಚಾರಧಾರೆಗಳು ಪ್ರಸಕ್ತ ಜಾಗತಿಕ ಕಾಲಘಟ್ಟದ ವಿದ್ಯಾರ್ಥಿಗಳಿಗೆ, ಯುವಜನರಿಗೆ ಅತ್ಯವಶ್ಯಕವಾದುದಾಗಿದೆ. ಈ ಹಿನ್ನೆಲೆಯಲ್ಲಿ ಕರಾಮುವಿಯು ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವನ್ನು ಸ್ಥಾಪಿಸಿದ್ದು ಅದರ ರೂಪರೇಷೆಗಳು ಈ ಮುಂದಿನAತಿವೆ:

1. ಕರಾಮುವಿಯಲ್ಲಿ ‘ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ’ವನ್ನು 2012ರಲ್ಲಿ ಸ್ಥಾಪಿಸಲಾಗಿದೆ.

2. ಈ ಕೇಂದ್ರದ ವತಿಯಿಂದ ವಿಶೇಷವಾಗಿ 2012 ರಿಂದ 2020ರ ವರೆಗೆ ‘ಸ್ನಾತಕೋತ್ತರ ಕುವೆಂಪು ಸಾಹಿತ್ಯ ಡಿಪ್ಲೊಮಾ ಕೋರ್ಸ್’ ಅನ್ನು ಈ ಪೀಠದವತಿಯಿಂದ ನಡೆಸಿ ಕಲಿಕಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ.

3. ಪ್ರಸ್ತುತ 2021ರಿಂದ ‘ಸ್ನಾತಕೋತ್ತರ ಕುವೆಂಪು ಸಾಹಿತ್ಯ ಸರ್ಟಿಫಿಕೇಟ್ ಕೋರ್ಸ್’ ಪ್ರಾರಂಭಿಸಲಾಗಿದೆ. ಈ ಕೋರ್ಸ್ ಒಂದು ವರ್ಷದ ಅವಧಿಯದಾಗಿದೆ. ಕುವೆಂಪು ಸಾಹಿತ್ಯವನ್ನು ವಿಶೇಷವಾಗಿ ಅಧ್ಯಯನ ಮಾಡುವ ಆಸಕ್ತರಿಗೆ ಅನುಕೂಲ ಮಾಡಿಕೊಡಲಾಗಿದೆ.

4. ಈ ಪೀಠದ ವತಿಯಿಂದ ಶೈಕ್ಷಣಿಕ ವರ್ಷದಲ್ಲಿ ರಾಷ್ಟç, ರಾಜ್ಯ ಹಾಗೂ ವಿಶ್ವವಿದ್ಯಾನಿಲಯ ಮಟ್ಟದ ವಿಚಾರ ಸಂಕಿರಣಗಳು ಮತ್ತು ವಿಶೇಷ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

5. ಪ್ರತಿ ವರ್ಷ ಕುವೆಂಪು ಅವರ ಜನ್ಮದಿನದಂದು ಶೈಕ್ಷಣಿಕವಾಗಿ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ.

ಮುಂದಿನ ದೃಷ್ಟಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ‘ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾಜದಲ್ಲಿ ಉನ್ನತ ಶಿಕ್ಷಣದಿಂದ ವಂಚಿತರಾಗಿರುವ ಹಿಂದುಳಿದ ವರ್ಗಗಳ, ಆಸಕ್ತರ ಮನೆಬಾಗಿಲಿಗೆ ಉನ್ನತ ಶಿಕ್ಷಣವನ್ನು ಒದಗಿಸುವ ಕಾರ್ಯದಲ್ಲಿ ನಿರತವಾಗಿದೆ. ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಪ್ರಾರಂಭಿಸಲು 2011-12ನೇ ಸಾಲಿನಲ್ಲಿ ಪರಿನಿಯಮಕ್ಕೆ ಮಾನ್ಯ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳು ಅಂಕಿತ ನೀಡಲಾಗಿದೆ. ಸುಮಾರು 11 ವರ್ಷಗಳಿಂದ ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ರಾಷ್ಟçಕವಿ ಕುವೆಂಪು ಕುರಿತ ಜನ್ಮದಿನಾಚರಣೆ, ಸಂಶೋಧನೆ, ಕಾರ್ಯಗಾರ ಮತ್ತು ಸಮ್ಮೇಳನವನ್ನು ನಡೆಸಿಕೊಂಡು ಬರುತ್ತಿದ್ದು, ಇದು ನಿರಂತರವಾಗಿ ಕಾರ್ಯಚಟುವಟಿಕೆಯಿಂದ ಕೂಡಿದೆ. ‘ಕುವೆಂಪು ಸಾಹಿತ್ಯ ಪಿ.ಜಿ.ಡಿಪ್ಲೊಮಾ’ 2011-12ನೇ ಸಾಲಿನಿಂದ 2021ರವರೆಗೆ ಮತ್ತು 2021-2022ರಿಂದ ‘ಸ್ನಾತಕೋತ್ತರ ಕುವೆಂಪು ಸಾಹಿತ್ಯ ಸರ್ಟಿಫಿಕೇಟ್ ಕೋರ್ಸ್’ ಅನ್ನು ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದು ತೇರ್ಗೆಡೆಯಾಗುತ್ತಿದ್ದಾರೆ. ಸದರಿ ಕೋರ್ಸ್ನ ಅನುಕೂಲತೆಯನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುತ್ತ್ತಿದ್ದಾರೆ.

ದ್ಯೇಯೋದ್ಧೇಶ

1. ಪ್ರತಿ ವರ್ಷ ಕುವೆಂಪು ಅವರ ಜನ್ಮದಿನಾಚರಣೆ ಆಚರಿಸಲಾಗುವುದು.

2. ರಾಜ್ಯ/ರಾಷ್ಟçಮಟ್ಟದ ವಿಚಾರ ಸಂಕಿರಣಗಳು/ಕಾರ್ಯಾಗಾರಗಳು/ಗೋಷ್ಠಿಗಳು/ಕಮ್ಮಟಗಳು/ ಸಮ್ಮೇಳನಗಳಲ್ಲಿ ಕುವೆಂಪು ಸಾಹಿತ್ಯ ವಿವಿಧ ಪ್ರಕಾರಗಳನ್ನು ಭೌತಿಕವಾಗಿ ಹಾಗೂ ಆನ್ಲೆöÊನ್ ಮೂಲಕ ಪರಿಚಯಿಸುವಂತಹದ್ದು.

3. ಕುವೆಂಪು ಸಾಹಿತ್ಯದ ಗ್ರಂಥಾಲಯ ಮಾಡುವಂತಹದ್ದು.

4. ಕುವೆಂಪು ಸಾಹಿತ್ಯದ ಬಗ್ಗೆ ಪ್ರಾಜೆಕ್ಟ್ ವರ್ಕ್ ಮಾಡುವಂತಹದ್ದು.

5. ಕುವೆಂಪು ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸುವುದು.

6. ಕುವೆಂಪು ಸಮಗ್ರ ಸಾಹಿತ್ಯದ ಬಗ್ಗೆ ಪ್ರಚಾರ ಮಾಡುವಂತಹದ್ದು.

7. ರಾಜ್ಯದ ವಿವಿಧ ಕಾಲೇಜುಗಳ ಸಹಯೋಗದೊಂದಿಗೆ ಕುವೆಂಪು ಸಾಹಿತ್ಯವನ್ನು ಪ್ರಚಾರ ಮಾಡುವಂತಹ ಕಾರ್ಯಕ್ರಮಗಳನ್ನು ರೂಪಿಸುವಂತಹದ್ದು.

8. ಕುವೆಂಪು ಅವರ ಪ್ರತಿಮೆಯನ್ನು ಸ್ಥಾಪಿಸುವಂತಹದ್ದು.

9. ರಾಜ್ಯ/ರಾಷ್ಟçಮಟ್ಟ/ಅಂತರರಾಷ್ಟç ಮಟ್ಟದಲ್ಲಿ ಕುವೆಂಪು ಸಾಹಿತ್ಯದ ಪುಸ್ತಕಗಳು/ಲೇಖನಗಳು/ಪ್ರಬಂಧಗಳನ್ನು ಪ್ರಕಟಿಸುವಂತಹದ್ದು.

10. ಕುವೆಂಪು ಜೀವನಚರಿತ್ರೆ, ಸಾಧನೆಗಳು, ವಿಚಾರಧಾರೆಗಳನ್ನು ತಿಳಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

11. ರಾಜ್ಯದ ವಿವಿಧ ಕಾಲೇಜುಗಳ ಸಹಯೋಗದೊಂದಿಗೆ ವಿಶೇಷ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮಗಳನ್ನು ಆಯೋಜಿಸುವುದು.

ಕುವೆಂಪು ವಿರಚಿತ ಭಾವಗೀತೆ, ಚಿತ್ರಕಲೆ, ಆಶುಭಾಷಣ, ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವುದು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು

2023-24 ರಿಂದ 2027-28 ರವರೆಗಿನ ಅವಧಿಗೆ KSOU ನ ಕೋರ್ಸ್‌ಗಳನ್ನು ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ಹೊಸ-ದೆಹಲಿಯಿಂದ ಗುರುತಿಸಲಾಗಿದೆ.

ಈ ವೆಬ್‌ಸೈಟ್‌ನಲ್ಲಿರುವ ಎಲ್ಲಾ ವಿಷಯಗಳನ್ನು ಕರಾಮುವಿ,ಮೈಸೂರು ಒಡೆತನದಲ್ಲಿದೆ ಮತ್ತು ನಿರ್ವಹಿಸುತ್ತದೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ಲಿಖಿತ ಒಪ್ಪಿಗೆಯಿಲ್ಲದೆ ಯಾವುದೇ ಮಾಧ್ಯಮದಲ್ಲಿ ನಕಲಿಸಬಾರದು ಅಥವಾ ಬಳಸಬಾರದು. * Copyrights © 2022 KSOU Mysuru. All rights reserved.